ಫ್ರಾನ್ಸೀಯಮ್
ರಾಸಾಯನಿಕ ಧಾತು : ಪ್ರತೀಕ Fr: ಪರಮಾಣು ಸಂಖ್ಯೆ 87 ಆವರ್ತಕೋಷ್ಟಕದಲ್ಲಿಯ ಇದರ ಸ್ಥಾನದಿಂದ ಇದು ಕ್ಷಾರಲೋಹಗಳಿಗೆ ಸೇರಿದ್ದೆಂದೂ ಬಹುಶಃ ವಿಕಿರಣಪಟುವೆಂದೂ ಊಹಿಸಲಾಗಿತ್ತು. ಇದರ ಆವಿಷ್ಕಾರದ ಬಗ್ಗೆ ಅನೇಕ ವರದಿಗಳಿವೆ. ಪೀರೇ ಎಂಬಾತ ಇದು ಆಕ್ಟೀನಿಯಮ್ 227 ರ ವಿಕಿರಣಪಟುತ್ವದಿಂದ ಉತ್ಪನ್ನವಾಗುತ್ತದೆಂದು ತೋರಿಸಿದ (1839). ಈ ವಿಭಜನೆ ಎರಡು ವಿಧವಾಗಿ ನಡೆಯುತ್ತದೆ. ಶೇಕಡಾ 1.2 ರಷ್ಟು ಕ್ರಿಯೆ ಆಲ್ಫ (x) ವಿಕರಣ ಪ್ರಸರಣ. ಇದರಿಂದ ಆಕ್ಟೀನಿಯಮ್ ಏ (ಧಾತು 87) ಉತ್ಪನ್ನವಾಗುತ್ತದೆ. ಶೇಕಡಾ 98.8 ರಷ್ಟು ಕ್ರಿಯೆ ಬೀಟ (() ವಿಕಿರಣ ಪ್ರಸರಣ. ಇದರಿಂದ ತೋರಿಯಮ್ 227 ಉತ್ಪನ್ನವಾಗುತ್ತದೆ. ಮೇಲಿನ ಕ್ರಿಯೆಯಲ್ಲಿ ಉತ್ಪನ್ನವಾಗುವ ಸಮಸ್ಥಾನಿ 223 ರ ಅರ್ಧಾಯು ಕೇವಲ 21 ವಿನಿಟುಗಳು. ತೋರಿಯಮ್ ಎಂಬ ಧಾತುವನ್ನು ಪ್ರೋಟಾನ್ ಕಣಗಳಿಂದ ಬಂಬಾಯಿಸುವುದರಿಂದ ಇದನ್ನು ಕೃತಕವಾಗಿ ತಯಾರಿಸಲಾಗಿದೆ. ಇದು ಅದ್ರಾವ್ಯ ಸೀಸಿಯಮ್ ಲವಣಗಳೊಡನೆ ಒತ್ತರಿಸಲ್ಪಡುತ್ತದೆ ಮತ್ತು ಕ್ಷಾರಲೋಹಗಳಂತೆ ವರ್ತಿಸುತ್ತದೆ.	
           (ಎನ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ